ವಿಶ್ವದ ರಾಷ್ಟ್ರಗಳನ್ನು ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸ್ಥಾನಬದ್ಧಗೊಳಿಸಿ ಕೆಳಕಂಡ ಪಟ್ಟಿಕೆಯಲ್ಲಿ ತೋರಿಸಲಾಗಿದೆ. ಈ ಪಟ್ಟಿಯಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ವಿಸ್ತೀರ್ಣವು ದೇಶದ ಒಟ್ಟು ನೆಲ ಮತ್ತು ನಾಡಿನೊಳಗೆ ಇರುವ ಜಲಪ್ರದೇಶಗಳ (ಸರೋವರ, ನದಿ ಮತ್ತು ಜಲಾಶಯ) ವಿಸ್ತೀರ್ಣಗಳು ಸೇರಿವೆ. ಅಂಟಾರ್ಕಟಿಕದ ಹಲ ಪ್ರದೇಶಗಳ ಮೇಲೆ ನಾನಾ ರಾಷ್ಟ್ರಗಳು ಸಾಧಿಸುವ ಸ್ವಾಮ್ಯವನ್ನು ಇಲ್ಲಿ ಪರಿಗಣಿಸಲಾಗಿಲ್ಲ.